ಇಂದಿನಿಂದ ದ್ವೀತಿಯ ಪಿ.ಯು.ಸಿ. ಪರೀಕ್ಷಾರಂಭ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆಗಳು ಪ್ರಾರಂಭಗೊಳ್ಳುತ್ತಿವೆ. ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ,ಪರೀಕ್ಷಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಸೇರಿದಂತೆ ಹಲವು ಕ್ರಮಗಳನ್ನ ಈ ಭಾರಿ ಪರೀಕ್ಷಾ ಮಂಡಳಿ ಕೈಗೊಂಡಿದೆ. ಇಂದು ಬೆಳಿಗ್ಗೆ 10.15 ಕ್ಕೆ ಶುರುವಾಗುವ ಎಕಾನಾಮಿಕ್ಸ್ ಹಾಗೂ ಭೌತಶಾಸ್ತ್ರ ಪರೀಕ್ಷೆಗೆ ಚಾಲನೆ ಸಿಗಲಿದೆ. ಪ್ರಸಕ್ತ ಸಾಲಿನಲ್ಲಿ 3 ಲಕ್ಷದ 52ಸಾವಿದ 290 ಬಾಲಕರು ಹಾಗೂ3 ಲಕ್ಷದ37 ಸಾವಿರದ 860 ಬಾಲಕಿಯರು ಸೇರಿದಂತೆ ಒಟ್ಟು 6 ಲಕ್ಷದ 90ಸಾವಿರದ 150 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.

ಅಂತಿಮ ವರ್ಷದ ಪರೀಕ್ಷೆ ಬರೆಯಲು ಶೇ.75 ರಷ್ಟು ಹಾಜರಾತಿ ಕಡ್ಡಾಯವಾಗಿರಬೇಕೆಂಬ ಆದೇಶವಿರುವ ಕಾರಣ,ಈ  ವರ್ಷ ಸುಮಾರು 3,700 ಪದವಿ ಪೂರ್ವ ವಿದ್ಯಾರ್ಥಿಗಳು ಹಾಜರಾತಿ ಪಡೆದುಕೊಳ್ಳಲು ವಿಫಲರಾಗಿದ್ದಾರೆ. 3,700 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಹಾಜರಾತಿ ಕೊರತೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಪಿಯು ಮಂಡಳಿ ತಯಾರಿಸಿದೆ.

ಡಿಸೆಂಬರ್ 31 2017ರ ಒಳಗೆ ಹಾಜರಾತಿ ಕೊರತೆಯಿದ್ದ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಲಾಗಿದೆ, ರಿಜಿಸ್ಟರ್ ಪೋಸ್ಟ್ ಮೂಲಕ ವಿವರ ಕಳುಹಿಸಲಾಗಿದೆ, ವಿದ್ಯಾರ್ಥಿಗಳ ಪೋಷಕರು ಕೋರ್ಟ್ ಗೆ ಮನವಿ ಸಲ್ಲಿಸಿ ಪರೀಕ್ಷೆ ಹಾಜರಾತಿಗೆ ಅನುಮತಿ ಪಡೆಯಲು ಸಹಾಯವಾಗಲೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಯು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಜರಾತಿ ಕೊರತೆಯಿರುವ ಈ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಕೂಡ ಅವಕಾಶವಿರುವುದಿಲ್ಲ, 2019ರ ಮಾರ್ಚ್ ನಲ್ಲಿ ಮಾತ್ರ ಎಕ್ಸಾಂ ಬರೆಯಲು ಸಾಧ್ಯ ಎಂದು ತಿಳಿಸಿದ್ದಾರೆ. ಯಾವುದೇ ತರಗತಿಯ ಅಂತಿಮ ವರ್ಷದ ಪರೀಕ್ಷೆ ಬರೆಯಲು ಶೇ.75 ರಷ್ಟು ಹಾಜರಾತಿ ಕಡ್ಡಾಯ ಮಾಡಲಾಗಿದ್ದು, ದ್ವಿತೀಯ ಪಿಯಸಿ ವಿದ್ಯಾರ್ಥಿಗಳಿಗೂ ಇದು  ಅನ್ವಯವಾಗಲಿದೆ, ಪದವಿ ಪೂರ್ವ, ಪದವಿಸ ಹಾಗೂ ಸ್ನಾತಕೋತ್ತರ, ಮತ್ತು ವೃತ್ತಿಪರ ಕೋರ್ಸ್ ಗಳಿಗೂ ಈ ನಿಯಮ ಅನ್ವಯವಾಗಲಿದೆ. ಅನೇಕ ಕಾಲೇಜುಗಳು ನೀಡಿದ ಮಾಹಿತಿ ಪ್ರಕಾರ ಖಾಸಗಿ ಶಾಲೆಯ ಸುಮಾರು 1,200 ವಿದ್ಯಾರ್ಥಿಗಳಿಗೆ ಈ ಬಾರಿ ಪ್ರವೇಶ ಪತ್ರ ದೊರೆತಿಲ್ಲ ಎಂದು ತಿಳಿದು ಬಂದಿದೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.