ಪರೀಕ್ಷೆಗಳು ಎದುರಿಸುವ ಹತ್ತನೇ ತರಗತಿ ಮಕ್ಕಳಿಗೆ ರೇಡಿಯೋ ಪಾಠ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮಾ.1ರಿಂದ 22ರ ವರೆಗೆ ವಿಶೇಷ ಮಾರ್ಗದರ್ಶಿ ಕಾರ್ಯಕ್ರಮವನ್ನು ಡಿಎಸ್‌ಇಆರ್‌ಟಿ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ರಾಜ್ಯದ 13 ಬಾನುಲಿ ಕೇಂದ್ರಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2.35ರಿಂದ 3.05ರ ವರೆಗೆ ಪ್ರಸಾರವಾಗಲಿದೆ. ಹಾಗೂ ಎಫ್‌.ಎಂ.ರೈನ್‌ ಬೋ 101.3 ಬೆಂಗಳೂರು, ಇಲ್ಲಿ ಸಂಜೆ 5.30ಕ್ಕೆ ಪುನಃ ಮರು ಪ್ರಸಾರವಾಗಲಿದೆ.

ಕಾರ್ಯಕ್ರಮದ ವಿವರಗಳು

ಮಾರ್ಚ್ 1 ಕನ್ನಡ ಭಾಷೆ
ಮಾರ್ಚ್ 2 ಇಂಗ್ಲೀಷ್ ಭಾಷೆ
ಮಾರ್ಚ್ 5 ಗಣಿತ ವಿಷಯ
ಮಾರ್ಚ್ 6 ,7 ವಿಜ್ಞಾನ ವಿಷಯ
ಮಾರ್ಚ್ 8,9 ಸಮಾಜ ವಿಜ್ಞಾನ
ಮಾರ್ಚ್ 13 ಹಿಂದಿ ವಿಷಯ
ಮಾರ್ಚ್ 14 ಸಂಸ್ಕೃತ  ಭಾಷೆ
ಮಾರ್ಚ್ 15 ಇಂಗ್ಲೀಷ್ ಭಾಷೆ
ಮಾರ್ಚ್ 16 ಉರ್ದು ಭಾಷೆ

ಮಾ.19ರ ಸೋಮವಾರ ಪರೀಕ್ಷೆ ಬರೆಯುವ ಕ್ರಮದ ಬಗ್ಗೆ ಡಾ.ಎಚ್‌.ಎಸ್‌.ಗಣೇಶ್‌ ಭಟ್‌, ಮಾ.20ರ ಮಂಗಳವಾರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲಾ ಅವರ ಆಶಯ ನುಡಿ, ಮಾ.21ರ ಬುಧವಾರ ಮಕ್ಕಳಿಗೆ ಮಾನಸಿಕ ಸ್ಥೈರ್ಯದ ಬಗ್ಗೆ ಡಾ.ಸಿ.ಆರ್‌.ಚಂದ್ರಶೇಖರ್‌ ಹಾಗೂ ಮಾ.22ರ ಗುರುವಾರ  ಪರೀಕ್ಷಾ ಮುನ್ನಾ ದಿವಸ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಹಿತನುಡಿಗಳನ್ನು ಹೇಳಲಿದ್ದಾರೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.