ಪರಿಸರದ ಬಗ್ಗೆ ಕೊರ್ಸ ಮಾಡಲು ಅಥವಾ ತಿಳಿಯಲು ಕುತೂಹಲವೇ ಒಮ್ಮೆ ಒದಿ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಪರಿಸರ ಅಧ್ಯಯನ ಎನ್ನುವದು ವಿಜ್ಞಾನದ ಭಾಗವಾಗಿದ್ದು ನಮ್ಮ ಪ್ರಕೃತಿಯ ಅಭಿವೃದ್ದಿಯೊಂದಿಗೆ ಮಾಲಿನ್ಯಕಾರ ಮತ್ತು ಇತರೆ ಅಪಾಯಗಳನ್ನು ನಿರ್ಮೂಲನೆ ಮಾಡುವ ಮೂಲಕ ನಿಕಟವಾದಂತ ಸಂಬಂಧವಿದೆ. ಪ್ರಕೃತಿ ಆರೋಗ್ಯದ ಮೇಲೆ ಪರಿಣಾಮಗಳು ಗುರುತಿಸಲು, ನಿಯಂತ್ರಿಸಲು ಅಥವಾ ತೊಡೆದುಹಾಕಲು  ಸರಿಯಾಗಿ ತರಬೇತಿ ಪಡೆಯುವದಾಗಿದೆ. ಪರಿಸರ ಅಧ್ಯಯನ ವಿಜ್ಞಾನದ ಕೇವಲ ಎಂಜಿನಿಯರಿಂಗ್ ವಿಭಾಗವಾಗಿದೆ, ಇದು ಮಾಲಿನ್ಯಕ್ಕಾಗಿ ಗಾಳಿ, ನೀರು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದು, ದತ್ತಾಂಶ ಸಂಗ್ರಹ ವಿಧಾನಗಳನ್ನು ನಿರ್ಧರಿಸುವ ಹೆಚ್ಚಿನ ಸಂಶೋಧನೆಗಳನ್ನು ಒಳಗೊಂಡಿರುತ್ತದೆ.

ಪರಿಸರ ಅಧ್ಯಯನದಲ್ಲಿ ವೃತ್ತಿ ಜೀವನ ಬೆಳೆಸಿಕೊಂಡವರು ತುಂಬಾ ಆಗಾದಕಾರವಾಗಿ ಬೆಳೆದು ನಿಂತಿದ್ದಾರೆ. ನಮ್ಮ ಸುತ್ತಮುತ್ತಲಿನ ನಿಸರ್ಗದ ಪ್ರತಿಯೊಂದು ಚಲನವಲನ  ಬಗ್ಗೆ ನೀವು ಕಲಿಯಬೇಕಾದರೆ ಪರಿಸರ ಅಧ್ಯಯನಕ್ಕೆ ಸಂಭಂದಪಟ್ಟ ಕೊರ್ಸ್ ಗಳು ಮತ್ತು ಕರಿಯರ್ ಜೀವನಕ್ಕೆ ಸಾಥ್ ನೀಡುವಂತ ಕೆಲಸಗಳು ವಿದೇಶದಲ್ಲಿ ಕೂಡ ಹೇಳತಿರದಷ್ಟಿವೆ. ಒಮ್ಮೆ ತಪ್ಪದೆ ಓದಿ ನೋಡಿ.

ಪರಿಸರ ಅಧ್ಯಯನ ಕೊರ್ಸ್ ಮಾಡಲು ಮೊದಲ ಬೆಸೀಕ್ ಸಂಗತಿ ಏನು ಎನ್ನುವದಾದರೆ, ದ್ವೀತಿಯ ಪಿ.ಯು.ಸಿ ಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡಿರಬೇಕಾಗುತ್ತದೆ . ಅಥವಾ ಸಾಕಷ್ಟು ಡಿಪ್ಲೋಮ್ ಕೊರ್ಸಗಳು ಕೂಡ ಲಭ್ಯ  ತದನಂತರದ ಆಯ್ಕೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್ ಡಿ ಹಲವಾರು ಸರ್ಟಿಫಿಕೇಟ್‌ಗಳು ಕೋರ್ಸ್ಗಳು  ಪರಿಸರ ವಿಜ್ಞಾನದಲ್ಲಿ  ಮಾಡಬುಹುದಾಗಿದೆ.

 ಎಷ್ಟು ವರ್ಷಗಳ ಕೊರ್ಸ ಇದಾಗಿದೆ.?

 • ಸಾಮಾನ್ಯವಾಗಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ 4 ವರ್ಷಗಳ ಶೈಕ್ಷಣಿಕ ವರ್ಷಗಳ ಅವಧಿಯನ್ನು ಹೊಂದಿರುತ್ತದೆ,
 • ಇದು 8 ಸೆಮಿಸ್ಟರೆ ಪದ್ದತಿಗಳಿದ್ದು,  ಕೊನೆಯಲ್ಲಿ ಪ್ರತಿ ವರ್ಷ 2 ಸೆಮಿಸ್ಟರು ವಿಶ್ವವಿದ್ಯಾಲಯದ ಸಿದ್ಧಾಂತ ಮತ್ತು ಆಯಾ ವಿಷಯಗಳಿಗೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಪ್ರವೇಶಾತಿಗಳ ಬಗ್ಗೆ :

 • ಸಾಮಾನ್ಯವಾಗಿ ಇಂಜಿನಿಯರಿಂಗ್ ಕೊರ್ಸ್ಗಳು ಸಿ.ಇ.ಟಿ ಮೂಲಕ ಸೀಟುಗಳನ್ನು ಭರ್ತಿ ಮಾಡಿಕೊಳ್ಳುತ್ತಾರೆ .
 • ಪರಿಸರ ಅಧ್ಯಯನಕ್ಕೆ ಸಂಭಂದ ಪಟ್ಟ ಕೊರ್ಸಗಳಿಗೂ ಸಾಮಾನ್ಯ ಪ್ರವೇಶಾತಿ ಪರೀಕ್ಷೆ ಎದುರಿಸಬೇಕಾಗುತ್ತದೆ.
 • ಮತ್ತು ಖಾಸಗಿ ಕಾಲೇಜುಗಳಲ್ಲಿ ಪೇಮೆಂಟ್ ಸೀಟುಗಳು ಕೂಡ ಪಡೆಯಬಹುದಾಗಿದೆ.

ಸಾಮಾನ್ಯವಾಗಿ ಬೇಡಿಕೆಯಲ್ಲಿರುವ ಕೊರ್ಸ್ ಗಳು

Certificate Courses:

 • Certificate in Environmental Studies
 • Certificate Courses in Environmental Science

Diploma Courses:

 • Diploma in Environmental Science
 • Diploma in Environmental Law
 • Diploma in Environment Protection

Bachelor Courses:

 • Bachelor of Science (B.Sc) in Environmental Science
 • Bachelor of Environmental Management
 • Bachelor of Science in Environmental Science & Water Management

Master Courses:

 • Master of Philosophy in Environmental Sciences
 • Post Graduate Diploma in Environment
 • Master of Science (M.Sc) in Environmental Management

Ph.D Courses:

 • Doctor of Philosophy in Environmental Science
 • Doctor of Philosophy in Earth Science

ಈ ಕೋರ್ಸ್ ಮುಗಿದ ನಂತರ ನಿಮ್ಮ ಕನಸು ನನಸು ಮಾಡುವ ಉತ್ತಮ ಸ್ಥಾನಗಳು ಇವೆ. ನೀವು ಯಾವ ತರದ ಇಂಜಿನಿಯರ್ ಆಗಬಹುದು ನೋಡಿ

 • ಎನ್ವಿರಾನ್ಮೆಂಟಲ್ ಇಂಜಿನಿಯರ್.
 • ಜಲಾಶಯ ಇಂಜಿನಿಯರ್.
 • ಏರ್ ಕ್ವಾಲಿಟಿ ಮ್ಯಾನೇಜರ್.
 • ಪರಿಸರ ವಿನ್ಯಾಸಕಾರ ಮತ್ತು ಯೋಜಕ.
 • ಮಾಲಿನ್ಯ ನಿಯಂತ್ರಣ ಇಂಜಿನಿಯರ್.
 • ಅಥೆರ್ ಕ್ವಾಲಿಟಿ ಇಂಜಿನಿಯರ್.

ಎನ್ವಿರಾನ್ಮೆಂಟಲ್ ಸೈನ್ಸ್ ಎಂಜಿನಿಯರಿಂಗ್ ಕೋರ್ಸ್ ಮುಗಿದ ನಂತರ ನಿಮ್ಮ ವೃತ್ತಿಜೀವನದ ಇ ಕೆಳಗಿನ ಕ್ಷೇತ್ರಗಳಲ್ಲಿ ಆರಂಭಿಸಬಹುದಾಗಿದೆ.

 • ಅಪಾಯಕಾರಿ ತ್ಯಾಜ್ಯ ನಿರ್ವಹಣೆ.
 • ವಿಷಕಾರಿ ವಸ್ತು ನಿಯಂತ್ರಣಗಳು.
 • ಮಾಲಿನ್ಯ ನಿಯಂತ್ರಣ ಮಂಡಳಿ.
 • ಪಾಲಿಮರ್ ಉದ್ಯಮ.
 • ಆಟೋಮೊಬೈಲ್ ವಲಯ. ಸಾಕಷ್ಟು ಇನ್ನು ಹಲವು ಕ್ಷೇತ್ರಗಳಿವೆ ಭವಿಷ್ಯ ರೂಪಿಸಿಕೊಳ್ಳಲು.

 

 

 


ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..