ಪೋಲಿಸ್ ಆಗುವ ನಿಮ್ಮ ಬಯಕೆಯ ಜೊತೆಗೆ ಇರಲಿ ಅದಕ್ಕೆ ಪೂರಕ ತಯಾರಿ..

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ರಾಜ್ಯ ಪೋಲಿಸ್ ಇಲಾಖೆವತಿಯಿಂದ ಸರಿಸುಮಾರು 1224 ಪೋಲಿಸ್ ಕಾನ್ಸ್-ಟೇಬಲ್ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ. ಇಗಾಗಲೇ ಕೆ.ಎಸ್.ಆರ್.ಪಿ. /ಐ.ಆರ್.ಬಿ. ಮತ್ತು ಕೆ.ಎಸ್.ಐ.ಎಸ್.ಎಫ್. ಜೊತೆಗೆ ಸಿವಿಲ್ ಪೋಲಿಸ್ ನೇಮಕಾತಿ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭಗೊಂಡಿದ್ದು ಸಾಕಷ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.  

ಸರಕಾರಿ ನೌಕರಿ ಪಡೆಯಬೇಕು ಅಥವಾ ಪೋಲಿಸ ಆಗಬೇಕು ಎಂಬ ನಿಮ್ಮ ನನಸು ಕನಸಾಗಲು ಕಠಿಣ ಅಭ್ಯಾಸ ಮುಖ್ಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಲು ಹಾಗೂ ದೈಹಿಕ ಸಾಮರ್ಥ್ಯ ಎಷ್ಟಿರಬೇಕು.? ಇನ್ನಿತರ ವಿವರಗಳು ಗಮನಿಸುವದಾದರೆ….

ಮೊದಲನೇಯದಾಗಿ ಪೋಲಿಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ತವಕ ನಿಮ್ಮಲ್ಲಿದ್ದರೆ, ಅದಕ್ಕೆ ಪೂರಕ ತಯಾರಿಯಲ್ಲಿರಬೇಕು. ಯಾವುದೇ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ವಿದ್ಯಾರ್ಹತೆ ಮುಖ್ಯವಾಗಿರುತ್ತದೆ.

ವಿದ್ಯಾರ್ಹತೆ :

ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್-ಕೆ.ಎಸ್.ಆರ್.ಪಿ (ಪುರುಷ) ಹುದ್ದೆಗಳಿಗೆ  ಸಂಬಂಧಿಸಿದಂತೆ ನಿಗದಿತ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. / 10ನೇ ತರಗತಿ ಅಥವಾ ತತ್ಸಮಾನ ಹೊಂದಿರಲೆಬೇಕು.

ವಯೋಮಿತಿ :

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಆಗಿರಬೇಕು. ಗರಿಷ್ಠ 25 ವರ್ಷಗಳು.

ಮಿಸಲಾತಿ ಅನ್ವಯ ಪ.ಜಾ ,ಪ.ಪಂ. ,ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷಗಳು ನಿಗದಿಯಾಗಿದೆ. ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 25 ವರ್ಷಗಳು ಮತ್ತು ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು .

ಹೇಗೆ ಇರುತ್ತೆ ತರಬೇತಿ :

 • ನೇಮಕಾತಿ ಹೊಂದಿದ ಅಭ್ಯರ್ಥಿಗಳು ಡಿಜಿ ಮತ್ತು ಐಜಿಪಿ ರವರು ಕಾಲ ಕಾಲಕ್ಕೆ ನಿರ್ದಿಷ್ಟಪಡಿಸಿದ ಪೊಲೀಸ್ ತರಬೇತಿ ಶಾಲಿಗಳಲ್ಲಿ ಮೂಲ ಪೊಲೀಸ್ ತರಬೇತಿಯನ್ನು ಪಡೆಯಬೇಕು .
 • ತರಬೇತಿಯಲ್ಲಿ ನಿಗದಿಪಡಿಸಿದ ಪರೀಕ್ಷೆಗಳಲ್ಲಿ ಪ್ರಶಿಕ್ಷಣಾರ್ಥಿಯು  ಉತ್ತೀರ್ಣವಾಗ ಬೇಕು.
 • ಅನು ತ್ತೀರ್ಣ ಆದವರು ಸೇವೆಯಿಂದ ವಜಾಗೊಳಿಸಲಾಗುತ್ತದೆ.

ಖಾಂಯ ಪೂರ್ವ ಅವದಿ :

ನೇರ ನೇಮಕಾತಿ ಮೂಲಕ ಆಯ್ಕೆಗೊಂಡು ಅಭ್ಯರ್ಥಿಗಳು  ಎರಡು ವರ್ಷ ಆರು ತಿಂಗಳು ಖಾಂಯ ಪೂರ್ವ ಅವದಿಯಲ್ಲಿರುತ್ತಾರೆ.

ವೇತನ ಶ್ರೇಣಿ ಮತ್ತು ಪಿಂಚಣಿ :

ವೇತನ ಶ್ರೇಣಿ ₹ 11600-200-12000-250-13000-300-14200-350-15600-400-17200-450-19000-500-21000 ರೂ. ವರೆಗೆ ಇರುತ್ತದೆ. ಮತ್ತು  ಪಿಂಚಣಿ ಸೌಲಭ್ಯ  ಸರ್ಕಾರದ ಆದೇಶ ಸಂಖ್ಯೆ: ಎಫ್‍ಡಿ(ಎಸ್‍ಪಿಎಲ್) 04 ಪಿಇಟಿ 2005, ದಿನಾಂಕ:31.03.2006 ರಂತೆ ನೂತನ ಪಿಂಚಣಿ ಸೌಲಭ್ಯ ಅನ್ವಯವಾಗಲಿದೆ.

ಲಿಖಿತ ಪರೀಕ್ಷೆ :

ಅಭ್ಯರ್ಥಿಯು ಸಹಿಷ್ಣುತೆ ಹಾಗೂ ದೇಹದಾರ್ಡ್ಯತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಮಾತ್ರ ಲಿಖಿತ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ (ಕೆಎಸ್‍ಆರ್‍ಪಿ) (ಪುರುಷ) ಹುದ್ದೆಗಳಿಗೆ ಸಂಬಂಧಿಸಿದಂತೆ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ 100 ಅಂಕಗಳ ಪ್ರಶ್ನೆಗಳು ಇರುತ್ತವೆ.

ಸಾಮಾನ್ಯ ಜ್ಞಾನ 

 1. ಸಾಮಾನ್ಯ ಅಧ್ಯಯನ
 2. ವಿಜ್ಞಾನ
 3. ನೀತಿ ಶಿಕ್ಷಣದ
 4. ಭೂಗೋಳ
 5. ಆಧುನಿಕ ಭಾರತದ ಇತಿಹಾಸ
 6. ಭಾರತದ ಸ್ವಾತಂತ್ರ್ಯ ಸಂಗ್ರಾಮ
 7. ಭಾರತದ ಸಂವಿಧಾನ, ಮೂಲಭೂತ ಹಕ್ಕುಗಳು
 8. ಮತ್ತು ನಿರ್ದೇಶನಾತ್ಮಕ ತತ್ವಗಳು ಒಳಗೊಂಡಿರುತ್ತದೆ.

ಮಾನಸಿಕ ಸಾಮರ್ಥ್ಯ ವಿಷಯಗಳು

 1. ಗಣನಾ ಕೌಶಲ್ಯ
 2. ಪ್ರಾದೇಶಿಕ ಮನ್ನಣೆ ಕೌಶಲ್ಯಗಳು  ಒಳಗೊಂಡಿರುತ್ತದೆ.

 ಪ್ರತಿ ಸರಿ ಉತ್ತರಕ್ಕೆ 1.00 ಅಂಕಗಳನ್ನು

 1. 100 ಅಂಕಗಳ ಬಹು ಆಯ್ಕೆ ಪ್ರಶ್ನೆ ಕೇಳಲಾಗುತ್ತದೆ.
 2. ಪ್ರತಿ ಸರಿ ಉತ್ತರಕ್ಕೆ 1 ಅಂಕಗಳನ್ನು ನಿಡಲಾಗುವದು.
 3. ನಿಗದಿತ ಪರೀಕ್ಷೆಯ ಅವಧಿ 2 ಗಂಟೆಗಳ ಸಮಯವಿರುತ್ತದೆ.

ಆಯ್ಕೆ ಪ್ರಕೀಯೆ ಹೇಗೆ ?

 1. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮತ್ತು ಅವರು ಅರ್ಹತಾ ಪರೀಕ್ಷೆಯಲ್ಲಿ ಪಡೆದ ಶೇಕಡಾ ಅಂಕಗಳನ್ನೂ ಕೂಡಿಸಿ ಅದರ ಆಧಾರದ ಮೇಲೆ ಅರ್ಹತಾ ಪಟ್ಟಿ ತಯಾರಿಸುತ್ತಾರೆ.
 2. ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆದವರು ವೈದಕೀಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.

ಇನ್ನುಳಿದ ದೈಹಿಕ ಅರ್ಹತೆ ಪರೀಕ್ಷೆ ಮತ್ತು ಹುದ್ದೆಗಳ ಸಂಪೂರ್ಣ ವಿವರಗಳು ತಿಳಿಯುವದ್ದಾಕ್ಕಾಗಿ ಅಥವಾ ಇನ್ನು ಅರ್ಜಿ ಸಲ್ಲಿಸದೆ ಇದ್ದ ಆಸಕ್ತ ಉದ್ಯೋಗಾಕಾಂಕ್ಷಿಗಳು ಇ ಕೆಳಗಿನ ಲಿಂಕ್ ಕ್ಲಿಕ್ ಮಾಡಿ


KSRP IRB CIVIL POLICE