ಯೋಗದಲ್ಲಿ ವೃತ್ತಿಜೀವನ ಹೇಗೆಲ್ಲ ಕಂಡುಕೊಳ್ಳಬಹುದಾಗಿದೆ

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಯೋಗದಲ್ಲಿ ವೃತ್ತಿಜೀವನ 

ಯೋಗ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ ಮಾನಸಿಕ,ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗಳಿಗೆ ಇಡಿಯಾಗಿ  ಬಳಸುತ್ತಾರೆ. ಯೋಗದ ಪ್ರಮುಖ ಶಾಖೆಗಳೆಂದರೆ ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ, ಮತ್ತು ಹಠ ಯೋಗ.

ನಾವು ಇಂದು  ಜೂನ್ 21 ಜಗತ್ತಿನೆಲ್ಲಡೆ ದೇಶ ವಿದೇಶಗಳಲ್ಲಿ ಯೋಗ ಆಚರಣೆ ಮಾಡುತ್ತಿದ್ದಾರೆ. ಆರೋಗ್ಯ ಮಾನಸಿಕ,ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗಳಿಗೆ ಇಡಿಗಾಗಿ ಜಾಗೃತರಾಗಿದ್ದಾರೆ. ಇ ಕ್ಷೇತ್ರಗಳಲ್ಲಿ ವೃತ್ತಿ ಜೀವನ ಹೇಗಿದೆ? ಏನಲ್ಲ ಕೊರ್ಸ್ ಗಳು ಕಲಿಯಬಹುದಾಗಿದೆ!

ಧ್ಯಾನ ಮತ್ತು ಯೋಗದ ಜ್ಞಾನವನ್ನು ಹಂಚಿಕೊಳ್ಳುವ ಬಹುತೇಕ ವೃತ್ತಿಪರರನ್ನು ಯೋಗಿಗಳು ಅಥವಾ ಯೋಗ ಶಿಕ್ಷಕರ ಎಂದು ಕರೆಯಲಾಗುತ್ತದೆ. ಇದು ಉತ್ತಮ ವೃತ್ತಿ ಆಯ್ಕೆಯಾಗಿದೆ. ಯೋಗವು ಪುರಾತನ ಕಲಾ ಮತ್ತು ಯೋಗ್ಯವಾದ ಮತ್ತು ಆರೋಗ್ಯಕರವಾದ ನೈಸರ್ಗಿಕ ಮಾರ್ಗವಾಗಿದೆ. ಇದು ಮಾನಸಿಕ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಫಿಟ್ನೆಸ್ ಇಂದಿನ ಪ್ರಪಂಚದ ಕರೆ, ಜಾಗತಿಕ ವೇದಿಕೆಯಲ್ಲಿ ಯೋಗ ಬೋಧಕ ಅಥವಾ ಶಿಕ್ಷಕನ ಅಗತ್ಯವನ್ನು ಹೆಚ್ಚಿಸುತ್ತದೆ.


Certificate Course:

ಯೋಗದಲ್ಲಿ ಸರ್ಟಿಫಿಕೇಟ್ ಕೋರ್ಸ್ (CCY):  ಒಂದೂವರೆ ತಿಂಗಳ ಕೋರ್ಸ್ ಆಗಿದೆ. ಈ ಕೋರ್ಸ್ಗೆ ವಯಸ್ಸಿನ ಮಿತಿ ಇಲ್ಲ .ಸಾಮಾನ್ಯ ವಿಜ್ಞಾನದಲ್ಲಿ ಅಥವಾ ಪಿ.ಯು.ಸಿ ಉತ್ತೀರ್ಣ ಹೊಂದಿರಬೇಕು.  ಕನಿಷ್ಠ ಶೇಕಡಾ 50 ರಷ್ಟು ಅಂಕ ಪಡೆದಿರಬೇಕಾಗುತ್ತದೆ.


Bachelor Course:

ಬ್ಯಾಚುಲರ್ ಇನ್ ಆರ್ಟ್ಸ್ (ಯೋಗ ಫಿಲಾಸಫಿ):  ಒಂದು ವರ್ಷ ಅವಧಿಯ ಕೋರ್ಸ್ ಆಗಿದೆ. ಸಾಮಾನ್ಯ ವಿಜ್ಞಾನದಲ್ಲಿ ಅಥವಾ ಪಿ.ಯು.ಸಿ ಉತ್ತೀರ್ಣ ಹೊಂದಿರಬೇಕು. ಪದವಿಯಲ್ಲಿ ಯೋಗ ಫಿಲಾಸಫಿ ಅಭ್ಯಸಿಸಬಹುದು.

ಯೋಗ ಶಿಕ್ಷಣದಲ್ಲಿ ಡಿಪ್ಲೊಮಾ: ಇದು ಯೋಗದಲ್ಲಿ ಒಂದು ಪ್ರಮಾಣಪತ್ರ ಕೊರ್ಸ, ಪದವೀಧರ ಅರ್ಹತೆ ಹೊಂದಿರುವ ಆರು ತಿಂಗಳ ಇಂಟರ್ನ್ಶಿಪ್ನೊಂದಿಗೆ ಒಂದು ವರ್ಷ ಅವಧಿಯ ಕೋರ್ಸ್ ಆಗಿದೆ.


Master Course:

ಪಿಜಿ. ಯೋಗ ಚಿಕಿತ್ಸೆಯಲ್ಲಿ ಡಿಪ್ಲೊಮಾ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಅರ್ಹತೆ ಹೊಂದಿಬೆಕು., ಒಂದು ವರ್ಷ ಅವಧಿಯ ಕೋರ್ಸ್ ಇದಾಗಿದೆ.

ಯೋಗದಲ್ಲಿ ಮಾಸ್ಟರ್ ಆಫ್ ಆರ್ಟ್ಸ್: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಅರ್ಹತೆ ಹೊಂದಿಬೆಕು., ಎರಡು ವರ್ಷಗಳ ಅವಧಿಯ ಕೋರ್ಸ್ ಇದಾಗಿದೆ.


Other Course:

ಯೋಗದಲ್ಲಿ ಅತ್ಯಾಧುನಿಕ ಯೋಗ ಶಿಕ್ಷಕರ ತರಬೇತಿ ಕೋರ್ಸ್ (AYTTC): ಎರಡು ವರ್ಷಗಳ ಅವಧಿಯೊಂದಿಗೆ ಯೋಗದಲ್ಲಿ ಪ್ರಮಾಣಪತ್ರ, ಡಿಪ್ಲೊಮಾ ಅಥವಾ ಪದವಿ ಅರ್ಹತೆಯೊಂದಿಗೆ ಒಂದು ತಿಂಗಳ ಅವಧಿಯ ಕೋರ್ಸ್.


ಯೋಗದಲ್ಲಿ ವೃತ್ತಿ ಅವಕಾಶಗಳು

ಯೋಗ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಯೋಗ ವಿಜ್ಞಾನದ ವಿದ್ಯಾರ್ಥಿ ಯಾವಲ್ಲ ಕರಿಯರ್ ನಲ್ಲಿ ಭಾಗಿಯಾಗಬಹುದು ಕೆಳಗೆ ನೋಡಿ.

 • ಯೋಗ ಬೋಧಕ
 • ಯೋಗ ಚಿಕಿತ್ಸಕ
 • ಯೋಗ ಸಲಹೆಗಾರ
 • ಯೋಗ ಸ್ಪೆಷಲಿಸ್ಟ್
 • ಯೋಗ ವೈದ್ಯರು
 • ಯೋಗ ಶಿಕ್ಷಕ
 • ರಿಸರ್ಚ್ ಆಫೀಸರ್- ಯೋಗ ಮತ್ತು ನೇಚರೊಪತಿ
 • ಯೋಗ ಏರೋಬಿಕ್ ಬೋಧಕ
 • ಯೋಗ ಸಲಹೆಗಾರ
 • ಪ್ರಕಟಣೆ ಅಧಿಕಾರಿ (ಯೋಗ)
 • ಯೋಗ ನಿರ್ವಾಹಕ

ಹೇಗಿದೆ ವೇತನ ಶ್ರೇಣಿ.?

 • ಹೊಸದಾಗಿ ಆರಂಭಿಕರಾಗಿ ಕೆಲಸ ಸೇರಿಕೊಂಡಾಗ 10000-25000 ವರಗೆ ಪಡೆದುಕೊಳ್ಳಬಹುದು ಇದು ನಿಮ್ಮ ಕೌಶಲ್ಯ ಸಾಮರ್ಥ್ಯದ ಮೇಲೆ ಅವಲಂಭಿವಾಗಿರುತ್ತದೆ.

ಯೋಗದಲ್ಲಿ ನೇಮಕಾತಿ ಮಾಡಿಕೊಳ್ಳುವ ಪ್ರಮುಖ ಕ್ಷೇತ್ರಗಳೆಂದರೆ-

 • ಸರ್ಕಾರ ಮತ್ತು ಖಾಸಗಿ ಶಾಲೆಗಳು
 • ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕಾಲೇಜುಗಳು ಅಥವಾ ಸಂಸ್ಥೆಗಳು
 • ಹೋಮಿಯೋಪತಿಯ ಸಂಶೋಧನೆ ಕೌನ್ಸಿಲ್ ಕೇಂದ್ರ ಮತ್ತು ರೆಸಾರ್ಟ್ಗಳು

ಕರ್ನಾಟಕದಲ್ಲಿ ಯೋಗ ಕೆಲಿಕೆ ಕೇಂದ್ರ ವಿದ್ಯಾಲಯಗಳು

 • SDM ಕಾಲೇಜ್ ಆಫ್ ನೇಚರೊಪತಿ ಮತ್ತು ಯೋಗಿಕ್ ಸೈನ್ಸಸ್, ದಕ್ಷಿಣ ಕನ್ನಡ
 • ಅಲ್ವಾಸ್ ಕಾಲೇಜ್ ಆಫ್ ನೇಚರೊಪತಿ ಮತ್ತು ಯೋಗ, ದಕ್ಷಿಣ ಕನ್ನಡ
 • ಸ್ವಾಮಿ ವಿವೇಕಾನಂದ ಯೋಗ ಅನುಸೂಧನಾ ಸಂಸ್ಠಾನ (ಎಸ್ – ವಿಯಾಸಾ), ಬೆಂಗಳೂರು
 • ಮಂಗಳೂರಿನ ಮಾನವ ಪ್ರಜ್ಞೆ ಮತ್ತು ಯೋಗಶಾಸ್ತ್ರ ವಿಜ್ಞಾನ ವಿಭಾಗ
 • ಸಮಕ್ ಯೋಗ, ಮೈಸೂರು

ವೃತ್ತಿಜೀವನದ ವ್ಯಾಪ್ತಿ

ನೀವು ಕಲಿಕೆಯಲ್ಲಿ ತೆಗೆದುಕೊಂಡ ಯೋಗ ತರಬೇತಿ ಆಧಾರದ ಮೇಲೆ, ನೀವು ಯೋಗ ಚಿಕಿತ್ಸಕರಾಗಿ ಸಂಶೋಧನೆ, ತರಬೇತಿ ಅಥವಾ ಕೆಲಸದ ಕ್ಷೇತ್ರಕ್ಕೆ ಆಯ್ಕೆ ಮಾಡಬಹುದು. ನೀವು ರೆಸಾರ್ಟ್ಗಳು, ಜಿಮ್ಸ್, ಶಾಲೆಗಳು, ಆರೋಗ್ಯ ಕೇಂದ್ರಗಳು, ವಸತಿ ಸಮಾಜಗಳು ಮತ್ತು ದೊಡ್ಡ ಸಂಸ್ಥೆಗಳಲ್ಲಿ ಕೆಲಸವನ್ನು ಕಾಣಬಹುದು. ಟೆಲಿವಿಷನ್ ಚಾನೆಲ್ಗಳು ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುತ್ತವೆ, ಮತ್ತು ಪ್ರಸಿದ್ಧ ವ್ಯಕ್ತಿಗಳು ವೈಯಕ್ತಿಕ ಯೋಗದ ತರಬೇತುದಾರರನ್ನು ನೇಮಿಸಿಕೊಳ್ಳಲು ಬಯಸುತ್ತಾರೆ. ಸ್ವ-ಉದ್ಯೋಗವು ಹಲವು ಆಯ್ಕೆಗಳ ಆಯ್ಕೆಯಾಗಿದೆ.