13-07-2018 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

 

ಕಿರಿಯರ ವಿಶ್ವ ಅಥ್ಲೆಟಿಕ್ಸ್: ಇತಿಹಾಸ ಬರೆದ ಹಿಮಾ

 • ಐಎಎಎಫ್ ಅಂಡರ್ -20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 400ಮೀ. ಓಟದಲ್ಲಿ ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಚಿನ್ನದ ಪದಕ ಗೆದ್ದಿದ್ದಾರೆ.
 • ಈ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಓಟಗಾರ್ತಿ ಹಿಮಾ
 • ಮಹಿಳೆಯರ 400 ಮೀ. ಓಟದ ಫೈನಲ್ ಸ್ಪರ್ಧೆಯಲ್ಲಿ 18 ವರ್ಷದ ಹಿಮಾ, 51.46 ಸೆ.ಗಳಲ್ಲಿ ಗುರಿ ತಲುಪಿ ಚೊಚ್ಚಲ ಚಿನ್ನಕ್ಕೆ ಮುತ್ತಿಟ್ಟರು.

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಜ್ಯಾಕ್ ಮಾರನ್ನು ಹಿಂದಿಕ್ಕಲಿರುವ ಮುಕೇಶ್ ಅಂಬಾನಿ

 • ರಿಲಾಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಕೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ಪಟ್ಟಿಯಿಂದ ಅಲಿಬಾಬಾ ಗ್ರೂಪ್‌ನ ಸ್ಥಾಪಕ ಜ್ಯಾಕ್ ಮಾರನ್ನು ಹಿಂದಿಕ್ಕಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
 • ಮುಕೇಶ್ ಅಂಬಾನಿಯ ಆಸ್ತಿ ಮೌಲ್ಯ ಶುಕ್ರವಾರದ ವೇಳೆಗೆ3 ಬಿಲಿಯನ್ ಡಾಲರ್ (3.03 ಟ್ರಿಲಿಯನ್ ರೂ.- 1 ಲಕ್ಷ ಕೋಟಿ ರೂ. ಎಂದರೆ ಒಂದು ಟ್ರಿಲಿಯನ್) ತಲುಪಿದೆ.

‘ಫೋರ್ಬ್ಸ್’ ಪಟ್ಟಿಯಲ್ಲಿ ಇಬ್ಬರು ಭಾರತೀಯರು

 • ಅಮೆರಿಕದ 60 ಅತ್ಯಂತ ಶ್ರೀಮಂತ ಮಹಿಳೆಯರ ‘ಫೋರ್ಬ್ಸ್’ ಪಟ್ಟಿಯಲ್ಲಿ ಇಬ್ಬರು ಭಾರತೀಯ ಮೂಲದ ಮಹಿಳೆಯರಿದ್ದಾರೆ.
 • ಜಯಶ್ರೀ ಉಳ್ಳಾಲ್ ಮತ್ತು ನೀರಜಾ ಸೇಥಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಮೂಲದವರು.

ರಾಘವನ್ ಐಸಿಡಬ್ಲ್ಯೂಎ ಜನರಲ್ ನಿರ್ದೇಶಕ  ಆಗಿ ನೇಮಕ

 • ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು  ಡಾ. ಟಿ.ಸಿ.ಎ. ರಾಘವನ್ ಅವರನ್ನು ಐಸಿಡಬ್ಲ್ಯೂಎ ನಿರ್ದೇಶಕ ಆಗಿ ನೇಮಕ ಮಾಡಿದ್ದಾರೆ.
 • ಡಾ. ರಾಘವನ್ 1982 ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿ ಆಗಿ ಸೇವೆ ಸಲ್ಲಿಸಿದರು.
 • ಡಾ. ರಾಘವನ್ ಇಸ್ಲಾಮಾಬಾದ್ ಮತ್ತು ಸಿಂಗಪುರ್ಗೆ ಭಾರತದ ಹೈ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.

ರೈಲ್ವೆ ತನ್ನ ಮೊದಲ ಏಕೀಕೃತ ಸೇತುವೆ ನಿರ್ವಹಣೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ

 • ರೈಲ್ವೆ ತನ್ನ ಮೊದಲ ಏಕೀಕೃತ ಬ್ರಿಡ್ಜ್ ಮ್ಯಾನೇಜ್ಮೆಂಟ್ ಸಿಸ್ಟಮ್ (IR-BMS) ಯನ್ನು ಪ್ರಾರಂಭಿಸಿದೆ.
 • ವೆಬ್-ಸಕ್ರಿಯಗೊಳಿಸಿದ IT ಅಪ್ಲಿಕೇಶನ್ ರೈಲ್ವೆಗಳ5 ಲಕ್ಷ ಸೇತುವೆಗಳೆಲ್ಲವೂ, ಬ್ರಿಡ್ಜ್ ಮಾಸ್ಟರ್ ಡೇಟಾ, ವರ್ಕ್ಸ್ ಡೇಟಾ, ಸೇತುವೆಯ ತಪಾಸಣೆ / ಮೇಲ್ವಿಚಾರಣೆ ಮತ್ತು ನಿರ್ವಹಣೆಯ ಕುರಿತಾದ ಮಾಹಿತಿಯ ಎಲ್ಲ ಪ್ರಮುಖ ಮಾಹಿತಿಯನ್ನು ಸಂಗ್ರಹಿಸುತ್ತದೆ.
 • ವಿವಿಧ ವ್ಯವಸ್ಥೆಗಳಿಗೆ ಸಂಬಂಧಿಸಿದ ಮಾಹಿತಿಯ ಅರ್ಥಪೂರ್ಣ ಸಂಯೋಜನೆ, ವಿಶ್ಲೇಷಣೆ ಮತ್ತು ಪ್ರಸರಣವನ್ನು ಅನುಮತಿಸುವುದು ಈ ವ್ಯವಸ್ಥೆಯ ಗುರಿ.

13-07-2018 ರ ಪ್ರಮುಖ ಪ್ರಚಲಿತ ವಿದ್ಯಮಾನ ಕ್ವಿಜ್

Leave a Reply

This site uses Akismet to reduce spam. Learn how your comment data is processed.

  Subscribe  
Notify of